ಚೆನ್ನೈ: ಅನಾರೋಗ್ಯದಿಂದ ಬಳಲುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ದಾಖಲಾಗಿರುವ ಚೆನ್ನೈನ ಅಪೋಲೋ ಆಸ್ಪತ್ರೆಯ ಸುತ್ತಲೂ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಚೆನ್ನೈನ ಬಹುತೇಕ ಪೊಲೀಸರು ಅಮ್ಮನಿಗೆ ಸುರಕ್ಷತೆ ಒದಗಿಸಲು ನಿಯೋಜನೆ ಗೊಂಡಿದ್ದು, ನಗರದಾದ್ಯಂತ ಸಾಮಾನ್ಯ ಜನರ ದೂರನ್ನು ಆಲಿಸಲು ಠಾಣೆಯಲ್ಲಿ ಪೊಲೀಸರೇ ಇಲ್ಲದ ಪರಿಸ್ಥಿತಿ ನಿರ್ವಣವಾಗಿದೆ. ಹಲವು ಪ್ರಕರಣಗಳ ತನಿಖೆಗೂ ಹಿನ್ನಡೆಯಾಗಿದೆ.
ವಂಚನೆ ಪ್ರಕರಣ ದಾಖಲಿಸಲು ಪೊಲೀಸ್ ಠಾಣೆಗೆ ಹೋಗಿದ್ದೆ. ಆದರೆ ಅಲ್ಲಿನ ಪೊಲೀಸರೆಲ್ಲರೂ ಅಪೋಲೋ ಆಸ್ಪತ್ರೆಗೆ ತೆರಳಿದ್ದು, ದೂರು ದಾಖಲಿಸಲು ಯಾರೂ ಇರಲಿಲ್ಲ. ಈ ಸಂಬಂಧ ನಗರ ಪೊಲೀಸ್ ಆಯುಕ್ತ ಕಚೇರಿಯಲ್ಲಿ ದೂರು ಸಲ್ಲಿಸಿದ್ದಾಗಿ ಚೆನ್ನೈನ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ. ನಗರದಾದ್ಯಂತ ಹಲವು ವ್ಯಕ್ತಿಗಳು ವಿವಿಧ ಪ್ರಕರಣ ದಾಖಲಿಸಲು ಪೊಲೀಸ್ ಠಾಣೆ ತೆರಳಿದ್ದರೂ ಅಲ್ಲಿನ ಸಿಬ್ಬಂದಿ ದೂರು ದಾಖಲಿಸಿಕೊಳ್ಳಲು ನಿರಾಕರಿಸಿ ದ್ದಾರೆ ಎನ್ನಲಾಗಿದೆ. ಬಹುತೇಕ ಹಿರಿಯ ಅಧಿಕಾರಿಗಳು ಅಪೋಲೋ ಆಸ್ಪತ್ರೆಯ ಭದ್ರತೆಗೆ ನಿಯೋಜನೆಗೊಂಡಿದ್ದಾರೆ.
No comments:
Post a Comment