Saturday, 22 October 2016

ಅಮೆರಿಕ ಅಧ್ಯಕ್ಷರ ವೈಯಕ್ತಿಕ ಇ-ಮೇಲ್ ಖಾತೆಗೂ ಕನ್ನ?



ವಾಷಿಂಗ್ಟನ್: ಭಾರತದಲ್ಲಿ ಡೆಬಿಟ್ ಕಾರ್ಡ್ ಗಳ ಮಾಹಿತಿ ಸೋರಿಕೆಯಾದ ವಿಚಾರ ಭಾರಿ ಸುದ್ದಿಗೆ ಗ್ರಾಸವಾಗಿರುವಂತೆಯೇ ಅತ್ತ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ವೈಯಕ್ತಿಕ ಇಮೇಲ್  ಅನ್ನು ಕೂಡ ಹ್ಯಾಕ್ ಮಾಡಲಾಗಿದೆ ಎಂದು ವಿಕಿಲೀಕ್ಸ್ ಸಂಸ್ಥೆ ಹೇಳಿದೆ.


ಈ ಬಗ್ಗೆ ಸ್ವತಃ ವಿಕಿಲೀಕ್ಸ್ ಸಂಸ್ಥೆ ಟ್ವೀಟ್ ಮಾಡಿದ್ದು, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ವೈಯಕ್ತಿಕ ಇಮೇಲ್ ಹ್ಯಾಕ್ ಆಗಿದ್ದು, ಅವರ ಕೆಲ ವೈಯುಕ್ತಿಕ ಇಮೇಲ್ ಮಾಹಿತಿ  ಸೋರಿಕೆಯಾಗಿದೆ ಎಂದು ಹೇಳಿದೆ. bobama@ameritech.net ನ ಕೆಲ ಮಹತ್ವದ ಟ್ವೀಟ್ ಗಳು ಸೋರಿಕೆಯಾಗಿದೆ ಎಂದು ವಿಕಿಲೀಕ್ಸ್ ಹೇಳಿದ್ದು, ಈ ಬಗ್ಗೆ ಕೆಲ ಇಮೇಲ್ ಗಳನ್ನು ಕೂಡ  ವಿಕಿಲೀಕ್ಸ್ ಸಂಸ್ಥೆ ಜಾಹಿರು ಮಾಡಿದೆ.
ಈ ಬಗ್ಗೆ ಅಮೆರಿಕದ ಖ್ಯಾತ ಪತ್ರಿಕೆಗಳೂ ಕೂಡ ವರದಿ ಮಾಡಿದ್ದು, 2008 ನವೆಂಬರ್ 4 ರ ಸಂಜೆ ಬರಾಕ್ ಒಮಾಬ ಅವರು ಜಾನ್ ಪೊಡೆಸ್ಚಾ ಅವರಿಗೆ ಬರೆದಿದ್ದ ಇಮೇಲ್ ಸೋರಿಕೆಯಾಗಿದ್ದು,  ಇದರಲ್ಲಿ ಒಮಾಮ ಅವರಿಗೆ ನವೆಂಬರ್ 15ರಂದು ನಡೆಯಲಿರುವ ಪೊಡೆಸ್ಟಾ ಅವರು ಜಿ-20 ಸಭೆಗೆ ಹಾಜರಾಗದಂತೆ ಸಲಹೆ ನೀಡಿದ್ದರು ಎಂದು ಪತ್ರಿಕೆಗಳು ವರದಿ ಮಾಡಿವೆ. ಅಂದು  ಅಮೆರಿಕದ ಅಧ್ಯಕ್ಷರಾಗಿದ್ದ ಜಾರ್ಜ್ ಡಬ್ಲ್ಯೂ ಬುಷ್ ಅವರು ಆಗತಾನೆ ಒಬಾಮ ಅವರಿಗೆ ಅಧಿಕಾರ ಹಸ್ತಾಂತರಿಸಿದ್ದರು.ಅಲ್ಲದೆ ಜಿ20 ಸಭೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದ್ದರು. ಈ ವೇಳೆ  ಪೊಡೆಸ್ಟಾ ಜಿ20 ಸಭೆಯಲ್ಲಿ ಪಾಲ್ಗೊಳ್ಳದಂತೆ ಸಲಹೆ ನೀಡಿದ್ದರು ಎಂದು ಹೇಳಲಾಗುತ್ತಿದೆ.

ಪೊಡಾಸ್ಟಾ ಹಾಗೂ ಒಬಾಮ ಅವರ ನಡುವೆ ನಡೆದಿದೆ ಎನ್ನಲಾದ ಸುಮಾರು 23 ಸಾವಿರ ಇಮೇಲ್ ಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಇನ್ನು ಅಮೆರಿಕ ಅಧ್ಯಕ್ಷರ ಇಮೇಲ್ ಹ್ಯಾಕ್ ಬಗ್ಗೆ ಪ್ರತಿಕ್ರಿಯಿಸಿರುವ ವೈಟ್ ಹೌಸ್ ಅಂತಹ ಯಾವುದೇ ಘಟನೆಗಳು ನಡೆದಿಲ್ಲ. ಇಮೇಲ್ ಹ್ಯಾಕ್ ಊಹಾಪೋಹದ ಹಿಂದೆ ರಷ್ಯಾದ ಹ್ಯಾಕರ್ ಗಳ  ಕೈವಾಡವಿರಬಹುದು ಎಂದು ಶಂಕೆ ವ್ಯಕ್ತಪಡಿಸಿದೆ.

No comments:

Post a Comment