Wednesday, 26 October 2016

ಅತ್ಯಾಚಾರ ಪ್ರಕರಣ ದಾಖಲಿಸಿದ ಪತ್ನಿ: ವಿಚ್ಛೇದನ ಕೋರಿದ ಲಾಯರ್‌

ಅಹಮದಾಬಾದ್‌: ಪ್ರೇಮವಿವಾಹವಾದ ಕೆಲವೇ ದಿನಗಳಲ್ಲಿ ಪತ್ನಿಯು ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸಿದ್ದರಿಂದ ಒಂಬತ್ತು ವರ್ಷಗಳ ಕಾನೂನು ಸಮರ ಎದುರಿಸಿ ಖುಲಾಸೆಗೊಂಡ ಬಳಿಕ ವಕೀಲ ಪತಿಯು ಆಕೆಯಿಂದ ವಿಚ್ಛೇದನ ಕೋರಿದ್ದಾರೆ. 
ಪಂಕಜ್‌ ಛವದ್‌ ಅವರು ಪತ್ನಿ ರೀನಾ ನತಾನಿ ಅವರಿಂದ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ. ಈ ಹಿಂದೆ ಹಲವು ಬಾರಿ ಪ್ರಕರಣದ ವಿಚಾರಣೆ ನಡೆದಿದ್ದರೂ ಪತ್ನಿ ಈವರೆಗೂ ಹಾಜರಾಗಿಲ್ಲ ಎಂದು ಛವದ್‌ ಹೇಳಿದ್ದಾರೆ. ಪತ್ನಿಯು ತನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಘನತೆಗೆ ಕುಂದು ತಂದಿರುವುದಕ್ಕೆ 51 ಲಕ್ಷ ರೂ ಪರಿಹಾರ ನೀಡಬೇಕು ಎಂದೂ ಛವದ್‌ ನ್ಯಾಯಾಲಯವನ್ನು ಕೋರಿದ್ದಾರೆ.

ಕರೀಂನಗರ ನಿವಾಸಿಗಳಾದ ಛವದ್‌ ಮತ್ತು ರೀನಾ ಅವರು 2006ರಲ್ಲಿ ಮದುವೆಯಾಗಿದ್ದರು. ಎರಡು ವಾರಗಳ ಬಳಿಕ ಪತಿ ಛವದ್‌ ಮತ್ತು ಅವರ ಸ್ನೇಹಿತ ಶರ್ಮಾ ಎಂಬವರ ವಿರುದ್ಧ ರೀನಾ ಸುಳ್ಳು ಪ್ರಕರಣ ದಾಖಲಿಸಿದ್ದರು. ಶರ್ಮಾ ಅತ್ಯಾಚಾರ ನಡೆಸಿದ್ದು, ಛವದ್‌ ಬ್ಲ್ಯಾಕ್‌ಮೇಲ್‌ ಮಾಡಿ ಬಲವಂತವಾಗಿ ಮದುವೆಯಾಗಿದ್ದ ಎಂದು ದೂರಿನಲ್ಲಿ ರೀನಾ ಆರೋಪಿಸಿದ್ದರು.

No comments:

Post a Comment