ಕೊಪ್ಪಳ : ರಾಜ್ಯದ ಯಾವುದೇ ಕಾಲೇಜುಗಳಲ್ಲಿ ಸಮ ವಸ್ತ್ರ ನೀತಿ ಸಂಹಿತೆ ರೂಪಿಸಿಲ್ಲ.ಬೇಕಾದರೆ ಹಿಂದೂ, ಕ್ರಿಶ್ಚಿಯನ್ ವಿದ್ಯಾರ್ಥಿನಿಯರೂ ಬುರ್ಖಾ ಧರಿಸಲಿ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹೇಳಿಕೆ ನೀಡಿದ್ದಾರೆ.
ರಾಜ್ಯದ ಕೆಲ ಜಿಲ್ಲೆಗಳ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಬುರ್ಖಾ ಧರಿಸಿ ಬರುವ ಕುರಿತಾಗಿನ ಗೊಂದಲಗಳ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಗುರುವಾರ ಉತ್ತರಿಸಿದ ರಾಯರೆಡ್ಡಿ 'ರಾಜ್ಯದ ಯಾವುದೇ ಕಾಲೇಜುಗಳಲ್ಲಿ ವಸ್ತ್ರ ನೀತಿ ಸಂಹಿತೆ ರೂಪಿಸಿಲ್ಲ. ಬುರ್ಖಾ ಧರಿಸಿ ಬಂದರೆ ತಪ್ಪೇನು.18 ವರ್ಷ ದಾಟಿದ ಬಳಿಕ ಪ್ರೌಢ ವಯಸ್ಸಿಗೆ ಬಂದಿರುತ್ತಾರೆ. ಅವರು ಡಿಸೆಂಟ್ ಡ್ರೆಸ್ ಹಾಕಿಕೊಂಡು ಬರಬೇಕು.ಈ ವಿಚಾರವನ್ನು ರಾಜಕೀಯಗೊಳಿಸುವುದು ಸರಿಯಲ್ಲ ಎಂದರು.
ಬುರ್ಖಾ ಧರಿಸಿಕೊಂಡು ಬರುವ ವಿದ್ಯಾರ್ಥಿನಿಯರಿಗೆ ತೊಂದರೆ ಕೊಡುವುದು ,ಹಾಕಿಕೊಂಡು ಬರದಂತೆ ತಾಕೀತು ಮಾಡುವುದು ಸರಿಯಲ್ಲ ,ಅಂತಹವರ ವಿರುದ್ಧ ದೂರು ಬಂದಿಲ್ಲ.ದೂರು ಬಂದರೆ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದರು.
ಮಂಗಳೂರು, ಹಾವೇರಿ,ಶಿವಮೊಗ್ಗ ಸೇರಿದಂತೆ ಕೆಲವೆಡೆ ಕಾಲೇಜುಗಳಲ್ಲಿ ಬುರ್ಖಾ ವಿವಾದ ಕಾಣಿಸಿಕೊಂಡಿದ್ದು, ಮುಸ್ಲಿಂ ವಿದ್ಯಾರ್ಥಿನಿಯರು ಬುರ್ಖಾ ಧರಿಸಿ ತರಗತಿಗಳಿಗೆ ಹಾಜರಾಗುವುದನ್ನು ವಿರೋಧಿಸಿ ಹಿಂದೂ ವಿದ್ಯಾರ್ಥಿ,ವಿದ್ಯಾರ್ಥಿನಿಯರು ಕೇಸರಿ ಶಾಲುಗಳನ್ನು ಧರಿಸಿ ತರಗತಿಗಳಿಗೆ ಹಾಜರಾದ ಬಗ್ಗೆ ವರದಿಯಾಗಿದೆ.

No comments:
Post a Comment